RS 200 NOTE: ನೀವು 200 ರೂ. ಮುಖಬೆಲೆಯ ನೋಟು ಹೊಂದಿದ್ದರೆ? ಈ ಮಾಹಿತಿಯನ್ನು ಓದಲೇಬೇಕು!
ಭಾರತದಲ್ಲಿ ಕೆಲವು ದಿನಗಳ ಹಿಂದೆ, ನಮಗೆಲ್ಲರಿಗೂ ತಿಳಿದಿರುವ ಹಾಗೆ RBI ರೂ. 2000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಆ ನೋಟನ್ನು ಜನರಿಂದ ಹಿಂಪಡೆದುಕೊಂಡಿತ್ತು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ರೂ.200 ಮುಖಬೆಲೆಯ ನೋಟುಗಳನ್ನು ನಿಷೇಧ ಗೊಳಿಸಿದೆ ಹಾಗೂ ನೋಟುಗಳನ್ನು ಹಿಂಪಡೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ, ರೂ.200 ನೋಟಿನ ವಿಷಯದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವ ನಿಲುವನ್ನು ತೆಗೆದುಕೊಂಡಿದೆ ಎನ್ನುವುದನ್ನು, ಜನರಿಗೆ ಹೆಚ್ಚಿನದಾಗಿ ತಿಳಿದು ಬಂದಿಲ್ಲ.
ಹೆಚ್ಚಿನ ಮಾಹಿತಿಗಳ ಪ್ರಕಾರ ರೂ.200 ಮುಖಬೆಲೆಯ ನೋಟುಗಳು, ಮಾರುಕಟ್ಟೆಗಳಲ್ಲಿ 137 ಕೋಟಿ ಮೌಲ್ಯದ ದೃಷ್ಟಿ ತೆಗೆದು ಹಾಕಲಾಗಿದೆ, ಹೀಗಾಗಿ ಮಾರುಕಟ್ಟೆಗಳಲ್ಲಿ ನೋಟುಗಳನ್ನು ರದ್ದುಗೊಳಿಸಲಾಗುತ್ತದೆ ಎನ್ನುವ ಮಾಹಿತಿಯು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಇಷ್ಟು ಪ್ರಮಾಣದ ನೋಟುಗಳನ್ನು ಮಾರುಕಟ್ಟೆಯಿಂದ ತೆಗೆಯಲು ಕಾರಣವೇನೆಂಬುದನ್ನು ನಾವೆಲ್ಲರೂ ತಿಳಿದುಕೊಳ್ಳುವುದು ಪ್ರಮುಖವಾಗಿದೆ.
ಇಷ್ಟು ಪ್ರಮಾಣದ ಹಣವನ್ನು ಪ್ಲಿಸರ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆಯಿಂದ ಹಿಂಪಡೆದುಕೊಂಡಿದೆ ಅನ್ನುವ ಮಾಹಿತಿಯು ನಿಜವಾಗಿದೆ, ಇದರ ಹಿಂದಿನ ಪ್ರಮುಖ ಕಾರಣ ನೋಟುಗಳನ್ನು ರದ್ದುಗೊಳಿಸುವುದಲ್ಲ, ಬದಲಾಗಿ ಮಾರುಕಟ್ಟೆಗಳಲ್ಲಿ ಹರಿದಿರುವ ಮತ್ತು ಹಾಳಾಗಿರುವ ನೋಟುಗಳನ್ನು ಬದಲಿ ಮಾಡುವ ಪ್ರಕ್ರಿಯೆಯಾಗಿದೆ. ಆರ್ ಬಿ ಐ ಪಡೆದಿರುವ ನೋಟುಗಳಲ್ಲಿ ಕೆಲವು ನೋಟುಗಳು ಹರಿದಿದೆ ಮತ್ತು ಕೆಲವು ನೋಟುಗಳು ಕೊಳಕಾಗಿದೆ ಹಾಗೂ ಕೆಲವೊಂದು ನೋಟುಗಳ ಮೇಲೆ ಗೀಚಲಾಗಿದೆ.
ತನ್ನ ಗುಣಮಟ್ಟವನ್ನು ಕಳೆದುಕೊಂಡಿರುವ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಡೆದುಕೊಳ್ಳುವಂತಹ ನಿರ್ಧಾರವನ್ನು ಮಾಡಿ ಈ ಪ್ರಕ್ರಿಯೆಯನ್ನು ತೆಗೆದುಕೊಂಡಿದೆ, ಇದೇ ತರಹ ಮಾರುಕಟ್ಟೆಯಲ್ಲಿ ರೂ. 500 ಮುಖ ಮೇಲೆಯ ನೋಟುಗಳು ಇದ್ದು, ಸುಮಾರು 633 ಕೋಟಿ ರೂಪಾಯಿ ಮೌಲ್ಯದ 500 ಮುಖಬೆಲೆಯ ನೋಟುಗಳನ್ನು ಇದೇ ಕಾಡಕ್ಕಾಗಿ ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ನೀವು ಅಂತಹ ನೋಟುಗಳನ್ನು ರದ್ದುಗೊಳಿಸಬೇಕಾಗುತ್ತದೆ ಎನ್ನುವ ಮಾಹಿತಿಯು ಸುಳ್ಳಾಗಿದೆ ಎನ್ನುವುದು ನೀವು ತಿಳಿಯಬೇಕಾದ ವಿಷಯವಾಗಿದೆ.