ಎ. 7 ಮತ್ತು 9 ರಂದು ಗೃಹ ಲಕ್ಷ್ಮೀ 2 ಕಂತಿನ ಹಣ ಜಮಾ: ಹೆಬ್ಬಾಳ್ಕರ್
ಬೆಳಗಾವಿ: ನವರಾತ್ರಿ ಸಂದರ್ಭದಲ್ಲಿ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಸಂತಸದ ಸುದ್ದಿ. ಎರಡು ತಿಂಗಳ ಹಣವನ್ನು ಅಕ್ಟೋಬರ್ನಲ್ಲಿ ಠೇವಣಿ ಇಡಲಾಗುವುದು.
ಮೂಡಲಗಿ ತಾಲೂಕಿನ ಕಲ್ಲೊಳ್ಳಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತುಗಳ ಹಣ ವರ್ಗಾವಣೆ ಇದೇ 7 ಮತ್ತು 9ರಂದು ನಡೆಯಲಿದೆ.
ತಾಂತ್ರಿಕ ಕಾರಣಗಳಿಂದ ಎರಡು ತಿಂಗಳ ಕಂತು ಪಾವತಿ ವಿಳಂಬವಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಕಂತುಗಳನ್ನು ಈ ತಿಂಗಳು ಜಮಾ ಮಾಡಲಾಗುವುದು ಎಂದು ತಿಳಿಸಿದರು