November 15, 2024

Bank Account: RBI ನಿಂದ 2 ರಿಂದ 3 ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಹೊಸ ರೂಲ್ಸ್ ಜಾರಿ

Bank Account: RBI ನಿಂದ 2 ರಿಂದ 3 ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಹೊಸ ರೂಲ್ಸ್ ಜಾರಿ

ಇಂದಿನ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಬ್ಯಾಂಕ್ ಅಕೌಂಟ್ ಹೊಂದಿರುತ್ತಾನೆ, ಹೌದು ಯಾಕೆಂದರೆ ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಬ್ಯಾಂಕ್ ಖಾತೆಯು ಕಡ್ಡಾಯವಾಗಿದೆ. ಬ್ಯಾಂಕ್ ವಿಚಾರವಾಗಿ ಸರ್ಕಾರವು ಇದೀಗ ಹೊಸ ನಿಯಮವನ್ನು ಜಾರಿ ಮಾಡಿದೆ, ಹಾಗಾಗಿ ಬ್ಯಾಂಕ್ ಅಕೌಂಟ್ ಹೊಂದಿರುವವರು ಈ ಮಾಹಿತಿಯನ್ನು ತಪ್ಪದೆ ಓದಿ.

ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬಳಿಯೂ ಒಂದರಿಂದ ಹೆಚ್ಚಿನ ಬ್ಯಾಂಕ್ ಖಾತೆಯು (Bank Account) ಇದ್ದೇ ಇರುತ್ತದೆ, ಸಂಬಳ ಖಾತೆ (Sallary Account), ಸಾಲದ ಬ್ಯಾಂಕ್ ಖಾತೆ, ಉಳಿತಾಯ ಖಾತೆ(Savings Account), ಸರ್ಕಾರದ ಸೌಲಭ್ಯದ ಖಾತೆ ಹೀಗೆ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ಜನರು ಹೊಂದಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಸರ್ಕಾರವು ಹೊಸ ನಿಯಮವನ್ನು ಜಾರಿ ಮಾಡಿದೆ. ನೀವು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು(Bank Account) ಹೊಂದಿ, ಅದನ್ನು ಉಪಯೋಗಿಸದೆ ಹಾಗೆ ಇಟ್ಟಿದ್ದರೆ ಅದನ್ನು ಕ್ಲೋಸ್ ಮಾಡಿ, ಯಾಕೆಂದರೆ ಅಂತಹ ಖಾತೆಯನ್ನು ನೀವು ರದ್ದುಗೊಳಿಸದಿದ್ದರೆ, ಖಾತೆ ಹೊಂದಿರುವ ಬ್ಯಾಂಕಿಗೆ ಹೆಚ್ಚಿನ ಮತದ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಅದಕ್ಕೂ ಕೂಡ ನೀವು ದಂಡ(Fine) ಕಟ್ಟಬೇಕಾಗುತ್ತದೆ.

ಹೊಸ ನಿಯಮ!

ಗ್ರಾಹಕರು ಬ್ಯಾಂಕ್ ಖಾತೆಯನ್ನು ತೆರೆಯುವಾಗ ಇಂತಿಷ್ಟು ಕನಿಷ್ಠ ಮೊತ್ತ ನಿರ್ವಹಣೆ ಮಾಡಬೇಕು ಎನ್ನುವ ನಿಯಮ ಇರುತ್ತದೆ. ಇಲ್ಲವಾದರೆ ಬ್ಯಾಂಕ್ ನಿಮಗೆ ದಂಡ ವಿಧಿಸುತ್ತದೆ, ಹೀಗಾಗಿ ನೀವು ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯ ಗೊಳಿಸುವುದು ಉತ್ತಮವಾಗಿದೆ. ಇಲ್ಲದಿದ್ದಲ್ಲಿ ನಿಮ್ಮ ಸಾಲ, ವ್ಯಾಪಾರ, ಹೂಡಿಕೆ ಹಣ ಕ್ರೆಡಿಟ್ ಕಾರ್ಡ್, ಸರ್ಕಾರಿ ಸೌಲಭ್ಯದ ಹಣ, ಇತ್ಯಾದಿ ಸಂಪರ್ಕ ಹೊಂದಿರುವ ಪಾವತಿಗಳನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲಾಗಿರುತ್ತದೆ ಇದರಿಂದ ನಿಮಗೆ ಮುಂದಕ್ಕೆ ಸಮಸ್ಯೆಗಳು ಎದುರಾಗಲಿದೆ. ಇದೇ ಸಮಸ್ಯೆಯಿಂದಾಗಿ ಹೆಚ್ಚಿನ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಇನ್ನು ಜಮಾ ಆಗಿಲ್ಲ, ಹಾಗಾಗಿ ವ್ಯವಹರಿಸದೆ ಇರುವ ಬ್ಯಾಂಕ್ ಖಾತೆಯನ್ನು ರದ್ದು ಮಾಡಿ.

ಹೆಚ್ಚಿನ ಪಾವತಿ ಶುಲ್ಕ ಇದೆ!

ನೀವು ಕೆಲವೊಂದು ಬ್ಯಾಂಕಿಂಗ್ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದ್ದು, ಕೆಲವು ಸೇವೆಗಳಿಗೆ ನೀವು ಶುಲ್ಕ ಪಾವತಿಸಬೇಕು. ನೀವು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಎಲ್ಲಾ ಬ್ಯಾಂಕುಗಳಿಗೂ(Banks) ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನೀವು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್(Credit Score) ಮೇಲೆ ಕೂಡ ಪರಿಣಾಮ ಬೀರಲಿದೆ, ಹೆಚ್ಚು ಖಾತೆಯನ್ನು ಹೊಂದಿರುವುದರಿಂದ ನೀವು ನಿರ್ವಹಣಾ ಶುಲ್ಕ ಮತ್ತು ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *