BPL CARD: ರಾಜ್ಯ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ.
ಸರ್ಕಾರವು ಬಡ ಜನರಿಗೆ ಆಹಾರದಾನಿಗಳನ್ನು ಖರೀದಿಸಲು ಮತ್ತು ಸರ್ಕಾರದ ಎಲ್ಲಾ ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡನ್ನು ಅತ್ಯಂತ ಪ್ರಮುಖ ದಾಖಲೆಯನ್ನಾಗಿಸಿದೆ, ಬಡತನ ರೇಖೆಗಿಂತ ಕೆಳಗಿರುವವರು ಬಿಪಿಎಲ್ ಕಾರ್ಡ್ ಮತ್ತು ಅಂತ್ಯ ಕಾರ್ಡ್ ಅನ್ನು ಪಡೆದುಕೊಳ್ಳುವುದು ಹಾಗೂ ಎಪಿಎಲ್ ಕಾರ್ಡ್ ಅನ್ನು ಗುರುತಿನ ಚೀಟಿಗಾಗಿ ಬಳಸಿಕೊಳ್ಳಬಹುದು. ಇದೇ ತರದ ಸಾಕಷ್ಟು ಕಾರ್ಡ್ ಗಳು ಇರುವುದರಿಂದ ದೇಶದಲ್ಲಿ ನಕಲಿ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸರ್ಕಾರವು ಇದರ ಬಗ್ಗೆ ಕೂಲಂಕುಶವಾಗಿ ಗಮನವನ್ನು ಹರಿಸಿ, ರಾಜ್ಯದಲ್ಲಿ ಯಾವೆಲ್ಲಾ ನಕಲಿ ಬಿಪಿಎಲ್ ಕಾರ್ಡ್ ಗಳು ಹಂಚಿಕೆಯಾಗಿದೆ ಎಂದು ಪತ್ತೆ ಹಚ್ಚಿ ಅಂತಹ ಕಾರ್ಡ್ಗಳನ್ನು ರದ್ದುಪಡಿಸುವ ಕೆಲಸಕ್ಕೆ ಮುಂದಾಗಿದೆ.
ಬಿಪಿಎಲ್ ಕಾರ್ಡ್ಗೆ ಇ-ಕೆವೈ ಸಿ ಕಡ್ಡಾಯ!
ರಾಜ್ಯದಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ, ದವಸ ಧಾನ್ಯಗಳನ್ನು ಬಿಪಿಎಲ್ ಮತ್ತು ಅಂತ್ಯದವರಿಗೆ ವಿತರಿಸಲಾಗುತ್ತದೆ. ಈಗ ಅಕ್ಟೋಬರ್ ತಿಂಗಳಿನಲ್ಲಿ ನೀಡಬೇಕಾದ ಹೊಸ ಧಾನ್ಯಗಳನ್ನು ಬಿಡುಗಡೆ ಮಾಡಿದ್ದು, E-kyc ಮಾಡಿಕೊಂಡಿರುವ ಫಲಾನುಭವಿಗಳಿಗೆ ದವಸಧಾನ್ಯಗಳನ್ನು ವಿತರಣೆ ಮಾಡಲು ಮುಂದಾಗಿದೆ. ಅಂತ್ಯೋದಯ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ 20 ಕೆ.ಜಿ ಅಕ್ಕಿ ಮತ್ತು 14 ಕೆಜಿ ಜೋಳವನ್ನು ವಿತರಣೆ ಮಾಡಲಾಗುತ್ತಿದೆ.
ಅದರಂತೆಯೇ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ 3 ಕೆಜಿ ಅಕ್ಕಿ ಮತ್ತು 2 ಕೆ.ಜಿ ಜೋಳ ಅಥವಾ ಗೋಧಿಯನ್ನು ಪಡೆದುಕೊಳ್ಳಲು ಅವಕಾಶವಿದೆ, ಅಂತ ರಾಜ್ಯ ಪೊಟಾಲ್ಯಾಬಿಲಿಟಿ ಮೂಲಕ ಪರಿಚಲ ಚೀಟಿಯನ್ನು ಪಡೆದುಕೊಂಡವರಿಗೆ 5 ಕೆಜಿ ಉಚಿತ ಅಕ್ಕಿಯನ್ನು ಕೇಂದ್ರ ಸರ್ಕಾರವು ನೀಡುತ್ತಿದೆ.
ಇ-ಕೆವೈಸಿ ಮಾಡಿಸಿಕೊಳ್ಳುವುದು ಹೇಗೆ?
ಅಕ್ಟೋಬರ್ ತಿಂಗಳಿನ ಆರಂಭದಿಂದಲೇ ಪಡಿತರ ವಸ್ತುಗಳನ್ನು ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿಗಳು ಮುಂದಾಗಿದೆ, ಬೆಳಿಗ್ಗೆಯಿಂದ ಸಂಜೆವರೆಗೂ ಫಲಾನುಭವಿಗಳು ಪಡಿತರ ವಸ್ತುಗಳನ್ನು ಪಡೆದುಕೊಳ್ಳಬಹುದು ಹಾಗೂ E-KYC ಮಾಡಿಕೊಳ್ಳದೆ ಇರುವ ಫಲಾನುಭವಿಗಳು ನ್ಯಾಯ ಬೆಲೆ ಅಂಗಡಿ ಅಲ್ಲಿ ಇ – KYC ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.
ಈಗ ಆಹಾರ ಇಲಾಖೆಯು ಪಡಿತರ ಚೀಟಿಯನ್ನು ಪಡೆದುಕೊಳ್ಳುವ ಮಾನದಂಡವನ್ನು ಬದಲಾಯಿಸಿದ್ದು, 1.20 ಲಕ್ಷಕ್ಕಿಂತ ಅಧಿಕ ವಾರ್ಷಿಕ ವರಮಾನವನ್ನು ಹೊಂದಿರುವ ಫಲಾನುಭವಿಗಳ ಕಾಡನ್ನು ರದ್ದುಪಡಿಸಲು ಮುಂದಾಗಿದೆ, ಇನ್ನು ಮುಂದೆ ಆಹಾರ ಸಾಮಾಗ್ರಿಗಳು ಸಲ್ಲಬೇಕಾದವರಿಗೆ ಮಾತ್ರ ಸಲ್ಲಬೇಕು ಹೊರತು ಅಕ್ರಮವಾಗಿ ಯಾರು ಪಡೆದುಕೊಳ್ಳುವ ಎನ್ನುವ ಉದ್ದೇಶದಿಂದ ಸರ್ಕಾರವು ಬಹಳ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು, ಅಕ್ರಮ ಕಾರ್ಡ್ಗಳನ್ನು ರದ್ದುಪಡಿಸಲು ಮುಂದಾಗಿದೆ.