SBI FIXED DEPOSIT: ಎಸ್ಬಿಐ ಗ್ರಾಹಕರಿಗೆ ಸಿಹಿ ಸುದ್ದಿ; FD ಯೋಜನೆಯ ಗಡುವ ವಿಸ್ತರಣೆ!
ಭಾರತದಲ್ಲಿ ಫಿಕ್ಸೆಡ್ ಡೆಪಾಸಿಟ್ ಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ, ಆದರೆ ಇತ್ತೀಚಿನ ದಿನಗಳಲ್ಲಿ ನಿಶ್ಚಿತ ಠೇವಣಿಯ ಹೂಡಿಕೆ ಮಾಡುವವರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ.
ಕೇಂದ್ರದ ಹಣಕಾಸು ಸಚಿವೆ ಯಾದ ನಿರ್ಮಲಾ ಸೀತಾರಾಮನ್ ಅವರು, ಈ ಹಿಂದೆ ಬ್ಯಾಂಕುಗಳ ಗ್ರಾಹಕರನ್ನು ಹೂಡಿಕೆಯತ್ತ ಆಕರ್ಷಿಸಲು ಅನೇಕ FD ಯೋಜನೆಗಳನ್ನು ಆರಂಭಿಸಬೇಕು ಎಂದು ಸಲಹೆಯನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಬ್ಯಾಂಕುಗಳು ಈಗಾಗಲೇ ನೀಡುತ್ತಿರುವ ನಿಶ್ಚಿತ ಠೇವಣಿ ಯೋಜನೆಗಳ (Fixed Deposit Scheme) ಗಡುವನ್ನು ವಿತರಣೆ ಮಾಡಿದೆ. ಗಡುವು ಕ್ರಮೇಣ ಮುಕ್ತಾಯಗೊಳ್ಳುತ್ತಿದಂತೆ, ಕೆಲವು ದಿನಗಳವರೆಗೆ ಗಡುವನ್ನು ಸರಿಹೊಂದಿಸಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ, ತನ್ನ ಎಸ್ ಬಿ ಐ ಅಮೃತ್ ಕಲಾಸ್ ಯೋಜನೆಯ(SBI Amrat Kalas Scheme) ಹೂಡಿಕೆಯ ಮಾಡುವ ಗಡುವನ್ನು ವಿಸ್ತರಣೆ ಮಾಡಿದೆ. ಇದು ಹೆಚ್ಚಿನ ಬಡ್ಡಿದರವನ್ನು ನೀಡುವ ಫಿಕ್ಸೆಡ್ ಠೇವಣಿಯಾಗಿದೆ.
ಈ ಹಿಂದೆ ಯೋಜನೆಯ ಗಡುವನ್ನು 30 ಸೆಪ್ಟೆಂಬರ್ 2024ಕ್ಕೆ ವಿಧಿಸಲಾಗಿತ್ತು, ಇದನ್ನು ಈಗಾಗಲೇ ಹಲವಾರು ಬಾರಿ ಪರಿಷ್ಕರಿಸಲಾಗಿದೆ ಮತ್ತು ಈಗ ಈ ಯೋಜನೆಯ ಹುಡುಕಿ ದಿನಾಂಕವನ್ನು ಮುಂದಿನ 31 ಮಾರ್ಚ್ 2025 ರ ವರೆಗೆ ಮುಂದೂಡಲಾಗಿದೆ. ಹಾಗೆಯೇ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಕೆಳಗಿನ ವಿವರಗಳನ್ನು ಓದುವ ಮುಖಾಂತರ ತಿಳಿಯೋಣ.
ಅಮೃತ್ ಕಲಾಸ್ ಯೋಜನೆಯ ಗಡುವನ್ನು 31 ಮಾರ್ಚ್ 2025 ರವರೆಗೆ ವಿಸ್ತರಣೆ ಮಾಡಲಾಗಿದೆ, 400 ದಿನಗಳ ನಿಗದಿತ ಅವಧಿಯ ಯೋಜನೆಯು 7.10 ಪ್ರತಿಶತದಷ್ಟು ಹೆಚ್ಚಿನ ಬಡಿದರವನ್ನು ಈ ಯೋಜನೆಯ ನೀಡುತ್ತದೆ, ಹಾಗೂ ಹಿರಿಯ ನಾಗರಿಕರಿಗೆ 7.60% ಬಡ್ಡಿದರವನ್ನು ನೀಡುತ್ತದೆ.
ಸಾಮಾನ್ಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ನಾಗರಿಕರಿಗೆ ಶೇಕಡ 3.50 ರಿಂದ 7 ಪ್ರತಿಶತದಷ್ಟು ಬಡ್ಡಿದರವನ್ನು ನೀಡುತ್ತದೆ, ಅಲ್ಲದೆ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡ 7.50% ಬಡ್ಡಿಯನ್ನು ಹಿಡಿಯುತ್ತದೆ ಆದರೆ ಅಮೃತ್ ಕಲಾಸ್ ಯೋಜನೆಗಳಲ್ಲಿ (SBI Fixed Deposit) ಹೂಡಿಕೆದಾರರು ಹೆಚ್ಚಿನ ಬಡ್ಡಿಯನ್ನು ಗಳಿಸಬಹುದಾಗಿದೆ, ಯೋಜನೆಯ ಸಂಪೂರ್ಣ ಮಾಹಿತಿಯನ್ನು ಹತ್ತಿರವಿರುವ ಸ್ಟೇಟ್ ಬ್ಯಾಂಕ್ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಿ.