November 21, 2024

Post Office: ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಪ್ರತಿ ತಿಂಗಳು ನೀವು ರೂ.9250 ಸಂಬಳ ಗಳಿಸಿ..

Post Office: ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಪ್ರತಿ ತಿಂಗಳು ನೀವು ರೂ.9250 ಸಂಬಳ ಗಳಿಸಿ..

ಪೋಸ್ಟ್ ಆಫೀಸ್ ಭಾರತೀಯ ನಾಗರಿಕರಿಗಾಗಿ ಅನೇಕ ರೀತಿಯ ಉಳಿತಾಯ ಯೋಜನೆಗಳನ್ನು ಆರಂಭಿಸಿದೆ, ಬೇರೆ ಯಾವುದೇ ಖಾಸಗಿ ಫೈನಾನ್ಸಿಯಲ್ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ಪೋಸ್ಟ್ ಆಫೀಸ್ನಲ್ಲಿ ಹಣವನ್ನು ಹೂಡಿಕೆ ಮಾಡುವುದು ಸಾಕಷ್ಟು ಲಾಭದಾಯಕ ಮತ್ತು ಸೌರಕ್ಷಿತವಾದ ಯೋಜನೆಯಾಗಿದೆ. ವಿಶೇಷವಾಗಿ ಹೇಳುವುದಾದರೆ ಅಂಚೆ ಇಲಾಖೆಯು (Post Office) ಆರಂಭಿಸಿದ ಮಂತ್ಲಿ ಇನ್ಕಮ್ ಸ್ಕೀಮ್ (Monthly Income Scheme)  ನಲ್ಲಿ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು ಆದಾಯವನ್ನು ಗಳಿಸಬಹುದಾಗಿದೆ.

ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್!

ಕೇಂದ್ರ ಸರ್ಕಾರದ ಅಡಿಯಲ್ಲಿ ಜಾರಿಯಾಗಿರುವಂತಹ, ಮಂತ್ಲಿ ಇನ್ಕಮ್ ಸ್ಕೀಮ್ ಅಂದರೆ, ನೀವು ಇದರಿಂದ ಪ್ರತಿ ತಿಂಗಳು ನಿರ್ದಿಷ್ಟ ಆದಾಯವನ್ನು ಪಡೆಯುವಂತಹ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಹೂಡಿಕೆಯ ಮೇಲೆ 7.4% ಬಡ್ಡಿ ಸಿಗಲಿದೆ. ಸಾವಿರಾರು ರೂಪಾಯಿಗಳ ನಿರ್ದಿಷ್ಟ ಹೂಡಿಕೆಯ ಮೂಲಕ ನೀವು ಈ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಬಹುದು, ನೀವು ವೈಯಕ್ತಿಕ ಮತ್ತು ಜಂಟಿ ಖಾತೆ ಯಾರನ್ನು ತೆರೆಯಬಹುದಾಗಿದೆ, ಈ ರೀತಿಯ ಅವಕಾಶವನ್ನು ಪೋಸ್ಟ್ ಆಫೀಸ್(Post Office) ನಿಮಗೆ ಕಲ್ಪಿಸಿದೆ.

ನೀವು ಪೋಸ್ಟ್ ಆಫೀಸ್ ನಲ್ಲಿ ವೈಯಕ್ತಿಕ ಖಾತೆಯನ್ನು ತೆರೆದರೆ ಗರಿಷ್ಠವಾಗಿ 9 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ, ಹಾಗೂ ಜಂಟಿ ಖಾತೆಯನ್ನು ತೆರೆದು ನೀವು ಗರಿಷ್ಠವಾಗಿ 15 ಲಕ್ಷವನ್ನು ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಯೋಜನೆಯಡಿ(Post Office Monthly Income Scheme)ಯಲ್ಲಿ 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಗಳು ಹೂಡಿಕೆಯನ್ನು ಆರಂಭಿಸಬಹುದು.

ನೀವು ಪೋಸ್ಟ್ ಆಫೀಸ್ನಲ್ಲಿ ಜಂಟಿ ಖಾತೆಯನ್ನು ತೆರೆದು, 15 ಲಕ್ಷವನ್ನು ಹೂಡಿಕೆ ಮಾಡಿದರೆ 7.4% ಬಡ್ಡಿದರದ ಆಧಾರದ ಮೇಲೆ ಪ್ರತಿ ತಿಂಗಳು ರೂ.9250 ಆದಾಯವನ್ನು ಗಳಿಸಬಹುದು. ಈ ಯೋಜನೆ 5 ವರ್ಷ ಮೆಚುರಿಟಿ ಹೊಂದಿರುವ ಯೋಜನೆಯಾಗಿದ್ದು, ಒಂದು ವೇಳೆ ಹಣವನ್ನು ಹೂಡಿಕೆ ಮಾಡಿರುವ ವ್ಯಕ್ತಿಯು ಮರಣ ಹೊಂದಿದರೂ ಕೂಡ ಠೇವಣಿಯನ್ನು ಪಡೆದುಕೊಳ್ಳುವ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ನೀವೇನಾದರೂ ಮೂರು ವರ್ಷಕ್ಕಿಂತ ಮುಂಚೆ ಹೂಡಿಕೆ ಮಾಡಿದ ಹಣವನ್ನು ಹಿಂತೆಗೆದುಕೊಂಡರೆ, ನೀವು ಎರಡು ಪ್ರತಿಶತ ಅಶೋಕವನ್ನು ಕಟ್ಟಬೇಕಾಗುತ್ತದೆ. ಮೂರು ವರ್ಷಗಳ ನಂತರ ಹಾಗೂ ಐದು ವರ್ಷಗಳ ಒಳಗೆ ಹಣವನ್ನು ಹಿಂಪಡಿದರೆ, ಒಂದು ಪ್ರತಿಶತ ಹಣವನ್ನು ಶುಲ್ಕ ಪಾವತಿ ಮಾಡಬೇಕಾಗುತ್ತದೆ.

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *