January 28, 2025
KSRTC Bus Ticket

KSRTC Bus Ticket : ಬಸ್‌ನಲ್ಲಿ ಪ್ರಯಾಣಿಸುವ ಪುರುಷರಿಗೆ ಶುಭ ಸುದ್ದಿ, ಇನ್ಮುಂದೆ ಸ್ಕ್ಯಾನ್ ಮಾಡಿ ಟಿಕೆಟ್

KSRTC Bus Ticket : ಬಸ್‌ನಲ್ಲಿ ಪ್ರಯಾಣಿಸುವ ಪುರುಷರಿಗೆ ಶುಭ ಸುದ್ದಿ, ಇನ್ಮುಂದೆ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಿರಿ.
ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಿರಿ

KSRTC Bus Ticketಗಾಗಿ ಸ್ಕ್ಯಾನರ್‌: ರಾಜ್ಯದಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತಿವೆ. ಬಸ್ ಪ್ರಯಾಣಕ್ಕೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಈ ಹಿಂದೆ ಬಸ್‌ಗಳಲ್ಲಿ ಚಿಲ್ಲರೆ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಉಚಿತ ಪ್ರಯಾಣ ಆರಂಭವಾದಾಗಿನಿಂದ ಮಹಿಳೆಯರು ಹಣ ನೀಡದೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ.

ಆದರೆ ಪುರುಷ ಪ್ರಯಾಣಿಕರು busಗಳಲ್ಲಿ ಪ್ರಯಾಣಿಸಲು ಪಾವತಿಸಬೇಕಾಗುತ್ತದೆ. ಪುರುಷರಿಗೆ ಉಚಿತ ಬಸ್ ಪ್ರಯಾಣದ ಪ್ರಯೋಜನವಿಲ್ಲ. ಇವತ್ತಿಗೂ BUSನಲ್ಲಿ ಗಂಡಸರು ಚಿಲ್ಲರೆಗಾಗಿ CONDUCTOR ಜೊತೆ ಜಗಳವಾಡುವುದನ್ನ ನೋಡಿದ್ದೇವೆ. ಈಗ ಕರ್ನಾಟಕ ಸರ್ಕಾರ BUS ಪ್ರಯಾಣದಲ್ಲಿ ಚಿಲ್ಲರೆ ಸಮಸ್ಯೆಗೆ ಹೊಸ ಪರಿಹಾರವನ್ನು ಕಂಡುಕೊಂಡಿದೆ. ಕರ್ನಾಟಕ ಸರ್ಕಾರದ ಈ ಹೊಸ ಸೌಲಭ್ಯದಿಂದ ಜನರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

KSRTC ಬಸ್ ಟಿಕೆಟ್‌ಗಾಗಿ ಸ್ಕ್ಯಾನರ್

ಬಸ್ಸಿನಲ್ಲಿ ಪ್ರಯಾಣಿಸುವ ಪುರುಷರಿಗೆ ಸಿಹಿ ಸುದ್ದಿ

ಈಗ ದೇಶದ ಜನರು ನಗದು ರಹಿತ ಮೋಡ್‌ನತ್ತ ಮುಖ ಮಾಡಿದ್ದಾರೆ. ಹಣ ತೆಗೆದುಕೊಳ್ಳಲು ಮರೆತಿದ್ದಾರೆ. ಫೋನ್ ಇದ್ದರೆ ಸಾಕು ಎಂದು ಅವರು ಭಾವಿಸುತ್ತಾರೆ. ಎಲ್ಲೆಡೆ ಯುಪಿಎ ಬಳಕೆ ಹೆಚ್ಚಾಗಿದೆ. ಇದನ್ನು ಮನಗಂಡ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಟಿಕೆಟ್ ಖರೀದಿಸಲು ಯುಪಿಎ ಪಾವತಿಗೆ ಅವಕಾಶ ಕಲ್ಪಿಸಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಜೂನ್ 25 ರಿಂದ ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಬಹುದು.

ಈಗ SCAN ಮಾಡಿ TICKET ಪಡೆಯಿರಿ

KSRTC Bus Ticket ಜೂನ್ 25 ರಿಂದ 4 ಡಿಪೋಗಳಲ್ಲಿ electronic ticketing ಯಂತ್ರಗಳ (etm) ಪ್ರಾಯೋಗಿಕ ಯೋಜನೆ ಪ್ರಾರಂಭಿಸಲಿದೆ. ಎಲ್ಲ ಕಂಡಕ್ಟರ್‌ಗಳಿಗೆ ತರಬೇತಿ ನೀಡಿದ ನಂತರ ಕೆಲವೇ ವಾರದಲ್ಲಿ ಇದನ್ನ ಎಲ್ಲ ಬಸ್‌ಗಳಿಗೆ ವಿಸ್ತರಿಸಲಾಗುವುದು. ಸಾರಿಗೆ ನಿಗಮವು 10,245 ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಪ್ರತಿ ತಿಂಗಳಿಗೆ 645 ರೂ. ಬಾಡಿಗೆ ನೀಡಲಾಗಿದೆ. ಪ್ರಯೋಗ ನಡೆಸುವ ಮೂಲಕ ಮೊದಲು ಎಲ್ಲೆಡೆ ಅಳವಡಿಸಲು ಪ್ರಯತ್ನಿಸುತ್ತೇವೆ ಎಂದು KSRTC ಎಂಡಿ ಅನ್ಬುಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇನ್ನು ಮುಂದೆ ಬಸ್ ನಲ್ಲಿ ಪುರುಷರು ತಮ್ಮ ಮೊಬೈಲ್ ಫೋನ್ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸಿ ಟಿಕೆಟ್ ಪಡೆಯಬಹುದು

WhatsApp Group Join Now
Telegram Group Join Now

Leave a Reply

Your email address will not be published. Required fields are marked *