SBI: ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್; ಬೈಕ್, ಕಾರ್ ಮತ್ತು ಗೃಹ ಸಾಲವನ್ನು ಹೊಂದಿದವರಿಗೆ ಸಿಹಿ ಸುದ್ದಿ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಿಹಿ ಸುದ್ದಿಯ ಮಾಹಿತಿಯೊಂದು ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಬಡ್ಡಿ ದರದ ಪರಿಷ್ಕರಣೆ ಮಾಡಿದೆ. ಎಲ್ಲಾ ಬ್ಯಾಂಕುಗಳು ಸಹ ಪ್ರತಿ ತಿಂಗಳು ಸಾಲ ಮತ್ತು ಠೇವಣಿಯ ಮೇಲಿನ ಬಡ್ಡಿ ದರಗಳನ್ನು ಸರಿಹೊಂದಿಸಲಿದ್ದು ಇದೀಗ SBI ಕೆಲವು ಆಯ್ದ ತಿಂಗಳ ಸಾಲಗಳ ಮೇಲಿನ ಬಡ್ಡಿಯ ದರಗಳನ್ನು ಬದಲಾವಣೆ ಮಾಡಿದ್ದು ಈ ಬಡ್ಡಿ ದರಗಳು ಇದೇ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ.
ಬಡ್ಡಿದರ ಕಡಿಮೆ!
ಕಳೆದ ಬಾರಿ ಎಸ್ ಬಿ ಐ ಸಾಲದ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಗೆ ಮಾಡಿದ್ದು, ಈಗ ಬಡಿದಾರವನ್ನು ಕಡಿಮೆ ಮಾಡಲು ಮುಂದಾಗಿದೆ. ಮೊದಲು 8.45% ಕಸ್ಟ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವಂತಹ ನಿಯಮ ಇರಲಿಲ್ಲ, ಇದೀಗ ಆ ಸಾಲದ ಮೇಲಿನ ಬಡ್ಡಿದರವನ್ನು 8.20% ಗೆ ಇಳಿಕೆ ಮಾಡಿದ್ದು ಸಾಲಗಾರರಿಗೆ ಈ ವಿಷಯದಲ್ಲಿ ಖುಷಿಯ ವಿಚಾರ ಸಿಕ್ಕಿದಂತಾಗಿದೆ.
ಬಡ್ಡಿ ದರದಲ್ಲಿ ಎಷ್ಟು ಕಡಿತ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲದ (MCLR) ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆ ಮಾಡಿದೆ. SBI ಕನಿಷ್ಠ ವೆಚ್ಚ ಆಧಾರಿತ ಸಾಲವನ್ನು ಶೇಕಡ 8.45 ರಿಂದ 8.20 ಗೆ ಕಡಿಮೆ ಮಾಡಿದೆ, ಅಂದರೆ ಕೆಲವು ಆಯ್ದ ತಿಂಗಳುಗಳ ಸಾಲದ ಮೇಲಿನ MCLR ಅನ್ನು 25 ಮೂಲಾಂಶದವರಿಗೆ ಕಡಿತಗೊಳಿಸಿದೆ.
ಅಧಿಕೃತ ಮಾಹಿತಿಗಳ ಪ್ರಕಾರ SBI ಓವರ್ನೈಟ್ ನಲ್ಲಿ MCLR ದರವನ್ನು 8.20% ರೆಷ್ಟು ಮತ್ತು ಒಂದು ತಿಂಗಳ MCRL ದರವನ್ನು 8.45% ನಿಂದ 8.20%, ಹಾಗೂ ಆರು ತಿಂಗಳ MCRL ದರವನ್ನು 8.85% ಕ್ಕೆ ಒಂದು ವರ್ಷದ ಎಂ ಸಿ ಎಲ್ ಆರ್ ಬಡ್ಡಿದರವನ್ನು 8.95% ಗೆ, ಎರಡು ವರ್ಷದ MCLR ದರವನ್ನು 9.05% ಗೆ, ಮೂರು ವರ್ಷಗಳ ಎಂ ಸಿ ಎಲ್ ಆರ್ ಬಡ್ಡಿ ದರವನ್ನು 9.1% ಕ್ಕೆ ಬದಲಾವಣೆ ಮಾಡಿದೆ.
ರೆಪೋ ದರ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಲೆ ಬಾರಿಯೂ ತನ್ನ ರೆಪೋ ದರ(6.5%)ವನ್ನು ಬದಲಾಯಿಸದೆ ಇರಲು ನಿರ್ಧಾರ ಮಾಡಿದ್ದು, ಹಾಗಾಗಿ ಬಡ್ಡಿದರವನ್ನು ಇಳಿಕೆ ಮಾಡಲಾಗಿದೆ ಎಂದು SBI ಹೇಳಿದೆ. ಈಗ ರಿವೈಸ್ಡ್ ಬಡ್ಡಿ ದರಗಳು ಮೇಲಿನಂತೆಯೇ ಇರಲಿದೆ.