EPF PENSION: ಪಿಂಚಣಿ ಪಡೆಯುವವರಿಗೆ ಸಿಹಿ ಸುದ್ದಿ! ಇನ್ನು ಮುಂದೆ ಎಲ್ಲಾ ಬ್ಯಾಂಕಿನಿಂದ ಪಿಂಚಣಿ ಪಡೆಯಬಹುದು
ದೇಶದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿವೃತ್ತಿ ಹೊಂದಿರುವ ನೌಕರರಿಗೆ ನಂತರ ನೌಕರರ ಪಿಂಚಣಿಯ ಮೂಲಕ (EPF Pension) ನಿವೃತ್ತ ನೌಕರರು ತಮ್ಮ ಪಿಂಚಣಿಯನ್ನು ಪಡೆಯುತ್ತಾರೆ. ಈ ಮೂಲಕವಾಗಿ ನೌಕರರು ತಮ್ಮ ನಿವೃತ್ತಿ ಜೀವನವನ್ನು ಆನಂದವಾಗಿ ಕಳೆಯುತ್ತಿದ್ದಾರೆ. ಸರ್ಕಾರಿ ನೌಕರರ ಮಾಸಿಕ ಪಿಂಚಣಿ ಪಡೆಯುವವರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಸಹಕಾರಿಯಾಗಲಿದೆ. ಈ ಯೋಜನೆಯು ಪಿಂಚಣಿದಾರಿಗೆ (Pension) ಶುಭ ಶುದ್ಧಿಯಾಗಲಿದೆ.
ನೌಕರರ ಪಿಂಚಣಿ ಯೋಜನೆಗಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು ಈಗ ಅನುಮೋದನೆಯನ್ನು ಮಾಡಿದೆ, ಪಿಂಚಣಿ ದಾರರು ಈಗ ತಮ್ಮ ಪಿಂಚಣಿಯನ್ನು ಯಾವುದೇ ಬ್ಯಾಂಕ್ ಶಾಖೆಯಿಂದ ಪಡೆದುಕೊಳ್ಳಬಹುದು. ಇದರೊಂದಿಗೆ ಭಾರತದ ಯಾವುದೇ ಬ್ಯಾಂಕ್ ಶಾಖೆಗಳಿಂದ ಪಿಂಚಣಿ(Pension) ಹಣವನ್ನು ವಿತ್ ಡ್ರಾ(Withdraw) ಮಾಡಿಕೊಳ್ಳಬಹುದು, ಇಂತಹ ಅವಕಾಶವನ್ನು ಪಿಂಚಣಿದಾರಿಗೆ ಕೇಂದ್ರ ಸರ್ಕಾರವು ಕಲ್ಪಿಸಿದೆ.
ಯೋಜನೆಯ ಬಗ್ಗೆ ಕೇಂದ್ರ ಸರ್ಕಾರವು ಬಿಗ್ ಅಪ್ಡೇಟ್ ನೀಡಿದೆ, ಕಾರ್ಮಿಕ ಇಲಾಖೆಯ ಸಚಿವರಾದ ಮನ್ಸುಖ್ ಮಾಂಡವೀಯಾ, EPF ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ಮೈಲಿಗಲ್ಲು ಆಗಲಿದೆ ಎಂದು ಹೇಳಿದ್ದಾರೆ. ಹಾಗಿದ್ದಲ್ಲಿ, ಸರ್ಕಾರವು ಅನುಮೋದಿಸಿರುವ ಹೊಸ ಯೋಜನೆಯಲ್ಲಿ ಪಿಂಚಣಿ ದಾರರಿಗೆ ಯಾವೆಲ್ಲ ಸೌಲಭ್ಯಗಳು ದೊರಲಿದೆ, ಎಂಬ ಮಾಹಿತಿಯನ್ನು ತಿಳಿಯೋಣ.
ಹೊಸ ಪಿಂಚಣಿ ಯೋಜನೆಯ ಸೌಲಭ್ಯಗಳು!
- ಪಿಂಚಣಿ ದಾರರು ದೇಶದ ಯಾವುದೇ ಭಾಗದಲ್ಲಿ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ತಮ್ಮ ಪಿಂಚಣಿ(EPF Pension) ಹಣವನ್ನು ಪಡೆಯಬಹುದು.
- ಸುಧಾರಿತವಾದ ಬ್ಯಾಂಕಿಂಗ್ ಮತ್ತು ಐಟಿ ತಂತ್ರಜ್ಞಾನದ ಮೂಲಕ ಪಿಂಚಣಿದಾರರಿಗೆ ಅನುಕೂಲ
- ಪಿಂಚಣಿದಾರರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಯಾದರೆ, ತಮ್ಮ ಬ್ಯಾಂಕ್ ಶಾಖೆಯನ್ನು ಇನ್ನೊಂದು ಶಾಖೆಯ ವರ್ಗಾಯಿಸಿದರೆ, ಸುಲಭವಾಗಿ ಪಿಂಚಣಿ ಪಡೆಯಬಹುದು.
- ಈ ಯೋಜನೆಯವೃತ್ತಿ ನಂತರ ಬೇರೆ ಊರುಗಳಿಗೆ ತೆರಳುವ ಪಿಂಚಣಿ ದಾರರಿಗೆ ಅನುಕೂಲವಾಗಲಿದೆ.
- ಯೋಜನೆಯಿಂದ 78 ಲಕ್ಷ ಪಿಂಚಣಿದಾರರಿಗೆ ಅನುಕೂಲ
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ CPPS ವ್ಯವಸ್ಥೆಯಿಂದ 78 ಲಕ್ಷ ಪಿಂಚಣಿ ದಾರರಿಗೆ ಅನುಕೂಲವಾಗಲಿದೆ, ಇದರಿಂದ ಪಿಂಚಣಿದಾರರು ಬ್ಯಾಂಕುಗಳಿಗೆ ಅಲೆಯುವ ಕೆಲಸವೂ ತಪ್ಪಲಿದೆ, ಅಷ್ಟೇ ಅಲ್ಲದೆ ಪಿಂಚಣಿದಾರರು ಪೆನ್ಷನ್ ವೆರಿಫಿಕೇಶನ್(Pension Verification) ಗಾಗಿ ಬ್ಯಾಂಕುಗಳಿಗೆ ತೆರಳುವ ಹಲವು ಅವಶ್ಯಕತೆ ಇಲ್ಲ. ತಕ್ಷಣವೇ ಪಿಂಚಣಿದಾರರ ಬ್ಯಾಂಕ್ ಖಾತೆಗೆ ಹಣ ಜಮ ಆಗುವುದರಿಂದ, ಪಿಂಚಣಿದಾರರು ಬ್ಯಾಂಕ್ ಮತ್ತು ಕಚೇರಿಗಳಿಗೆ ಅಲೆದಾಡುವ ಕೆಲಸ ತಪ್ಪಲಿದೆ.
ಈ CPPS ಸೌಲಭ್ಯ 2025 ರ ಜ.1 ರಿಂದ ಲಭ್ಯ!
ಕೇಂದ್ರ ಸರ್ಕಾರವು ಪಿಂಚಣಿ ದಾರರಿಗೆ ತಾವೀರುವ ಸ್ಥಳದಲ್ಲಿಯೇ ಪಿಂಚಣಿ ಪಡೆಯುವ ಅವಕಾಶವನ್ನು ಕಲ್ಪಿಸಿದೆ, ಈ ಉಪಕ್ರಮವು ಜನವರಿ 1 2025ರಿಂದಲೇ ಜಾರಿಗೆ ಬರಲಿದೆ. ದೇಶದಾದ್ಯಂತ ಕೇಂದ್ರ ಸರ್ಕಾರದ ಈ ನಡೆಯಿಂದ ಪಿಂಚಣಿ ದಾರಿಗೆ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.